ಸಿಪಿಜೆ ಸುರಕ್ಷಾ ಸಲಹೆ: ಕೊರೋನಾವೈರಸ್ ಸಾಂಕ್ರಾಮಿಕ ವರದಿಗಾರಿಕೆ

PEDRO PARDO / AFP

ಪರಿಷ್ಕರಿಸಿದ ದಿನಾಂಕ ೨೦ನೇ ಮೇ ೨೦೨೧

ವಿಶ್ವ ಅರೋಗ್ಯ ಸಂಸ್ಥೆಯು ಮಾರ್ಚ್ 11, 2020ರಂದು ಕೋವಿಡ್19ನ್ನು (ನೋವಲ್ ಕೊರೊನ ವೈರಸ್) ಪಿಡುಗೆಂದು ಘೋಷಿಸಿತು. ವಿಶ್ವದಾದ್ಯಂತ ಪರಿಸ್ಥಿಯು ಬದಲಾಗುತ್ತಿದ್ದು, ಕೋವಿಡ್19ರ ಹೊಸ ಪ್ರಭೇಧಗಳು ಕಂಡುಬಂದಿರುವ ಆಧಾರದ ಮೇರೆಗೆ ಮತ್ತು ಲಸಿಕಾಕರಣ ಹೆಚ್ಚುತ್ತಿರಲು ಅನೇಕ ರಾಷ್ಟ್ರಗಳು ಪ್ರವಾಸ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳನ್ನು ಒಂದೇ ಕಠಿಣಗೊಳಿಸುತ್ತಿದ್ದಾರೆ ಅಥವಾ  ಕಡಿಮೆಗೊಳಿಸುತ್ತಿದ್ದರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ವಿಶ್ವಾದ್ಯಂತ ಈ ವೈರಸ್ ಬಗ್ಗೆ ಮತ್ತು ಅದರ ವಿರುದ್ಧ ಸರ್ಕಾರಗಳು ನಡೆಸುತ್ತಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಿಪಿಜೆ ಪ್ರಕಾರ ಅನೇಕ ದೇಶಗಳ ಸರ್ಕಾರಗಳು ಇಂತಹ ಸ್ವತಂತ್ರ ವರದಿಗಾರರ ಮೇಲೆ ಹಾಗು ಸುಲಭವಾಗಿ ಲಭಿಸುತ್ತಿರುವ ಮಾಹಿತಿಯ ಮೇಲೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿವೆ.  ಮಾಧ್ಯಮ ಸಿಬ್ಬಂದಿಗಳು ಬಹಳಷ್ಟು ತೊಂದರೆ ಹಾಗು ಒತ್ತಡವನ್ನು ಎದುರಿಸುತ್ತಿದ್ದು, ಹಲವಾರು ಬಾರಿ ಪ್ರಯಾಣಿಸುವಾಗ, ಸಂದರ್ಶಿಸುವಾಗ ಮತ್ತು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಪತ್ರಕರ್ತರು ಸಿಪಿಜೆಗೆ ನೀಡಿರುವ ಸಂದರ್ಶನದಿಂದ ತಿಳಿದುಬಂದಿದೆ. ಪತ್ರಕರ್ತರು ಸೆನ್ಸಾರ್ಶಿಪ್, ಬಂಧನ, ದೈಹಿಕ ಮತ್ತು ಆನ್‌ಲೈನ್ ಕಿರುಕುಳ ಮತ್ತು ಕೋವಿಡ್19ರ ಕಾರಣದಿಂದಾಗಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ಈತ್ತಿಚೆಗಿನ ಸಿಪಿಜೆ ವರದಿಯಲ್ಲಿ ಗುರುತಿಸಲಾಗಿದೆ.

ವ್ಯಾಧಿಗೆ ಸಂಬಂಧಪಟ್ಟ ವರದಿಯನ್ನು ತಯಾರಿಸುತ್ತಿರುವ ಪತ್ರಕರ್ತರು ಹೊಸ ಸಲಹೆ ಮತ್ತು ನಿರ್ಬಂಧನೆಗಳ ಬಗ್ಗೆ ತಿಳಿದುಕೊಳ್ಳಲು ವಿಶ್ವ ಅರೋಗ್ಯ ಸಂಸ್ಥೆ ಮತ್ತು ಸ್ಥಳೀಯ ಸಾರ್ವಜನಿಕ ಅರೋಗ್ಯ ಕೇಂದ್ರದ ಮಾಹಿತಿಯನ್ನು ಅನುಸರಿಸಬೇಕು. ಕೋವಿಡ್-19 ವ್ಯಾಧಿಯ ಯಾವುದೇ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಲು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಕೊರೋನ ವೈರಾಣು ಮಾಹಿತಿ ಕೇಂದ್ರವು ವಿಶ್ವಾಸಾರ್ಹ ಮತ್ತು ಸುರಕ್ಷಿತ ಸಂಪನ್ಮೂಲವಾಗಿದೆ.

ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ಸುರಕ್ಷತೆ

ಅಂತಾರಾಷ್ಟ್ರೀಯ ಪ್ರಯಾಣದ ಮೇಲಿನ ನಿರ್ಬಂಧನೆಗಳು ಹಾಗು ಸುರಕ್ಷತಾ ಕ್ರಮಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತವೆ. ಇದರರ್ಥ, ಪೂರ್ವ ನಿಯೋಜಿತ ಕೆಲಸವು ಅಲ್ಪ ಸೂಚನೆಯೊಂದಿಗೆ ಅಥವಾ ಯಾವುದೇ ಸೂಚನೆಗಳು ಇಲ್ಲದೆ ರದ್ದುಗೊಳ್ಳಬಹುದು.

ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ಪ್ರಕಾರ, ಪ್ರತ್ರಿಕಾ ರಂಗದಲ್ಲಿ ಇರುವವರು ಗಮನ ನೀಡಬೇಕಾದ ವಿಷಯವೆಂದರೆ, ಲಸಿಕೆಯನ್ನು ಪಡೆದವರು ಸಹ ವೈರಾಣುವನ್ನು ಪ್ರಸರಿಸುವ ಸಾಧ್ಯತೆಗಳು ಇವೆ. ಯೇಲ್ ವೈದ್ಯಕೀಯ ವಿಭಾಗವು ತಿಳಿಸಿರುವಂತೆ, ವಿವಿಧ ಬಗೆಯ ಲಸಿಕೆಗಳು ವೈರಾಣುವಿನ ಬೇರೆ ಬೇರೆ ಪ್ರಭೇದಗಳ ವಿರುದ್ಧ ಪರಿಣಾಮಕಾರಿಯಾಗಿವೆ. ಹಾಗಾಗಿ, ಕೋವಿಡ್-19ನ್ನು ತಡೆಗಟ್ಟಲು ಚಾಲ್ತಿಯಲ್ಲಿರುವ ಸುರಕ್ಷತಾ ಕ್ರಮಗಳಾದ ದೈಹಿಕ ಅಂತರವನ್ನು ಪಾಲಿಸುವುದು ಮತ್ತು ಮಾಸ್ಕ್/ಮುಖವಾಡ ಧರಿಸುವುದು ಅಗತ್ಯವಾಗಿದೆ.

ಕೋವಿಡ್-19 ಸಾಂಕ್ರಾಮಿಕದ ವರದಿಗಾರಿಕೆಗೆ ಯೋಚಿಸುತ್ತಿರುವವರು ಈ ಕೆಳಗಿನ ಸುರಕ್ಷಾ ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ನಿಯೋಜನೆಗೆ ಮುಂಚಿತವಾಗಿ

ಮಾನಸಿಕ ಸುಸ್ಥಿತಿ

ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ರಿಯೂಟರ್ಸ್ ಸಂಸ್ಥೆಯ ಪ್ರಕಾರ, ಕೋವಿಡ್ 19 ಪಿಡುಗಿನ ಬಗ್ಗೆ ವರದಿ ಮಾಡುವಾಗ ನುರಿತ ಪತ್ರಕರ್ತರು ಕೂಡ ಮಾನಸಿಕ ಅಡಚಣೆಗಳನ್ನು ಕಾಣುವ ಸಂಭವವಿದೆ. ಪತ್ರಕರ್ತರನ್ನು ನಿರ್ವಹಿಸುವ ಸಂಸ್ಥೆಗಳು ಸಮಯಕೆ ತಕ್ಕಂತೆ ಅವರವರ ಸಿಬ್ಬಂದಿಗಳ ಮೇಲ್ವಿಚಾರಣೆ ನಡೆಸಿ, ಅವರ ಮಾನಸಿಕ ಆರೋಗ್ಯದ ಮೇಲೆ ನಿಗಾ ಇಡಬೇಕು. ಅವರಿಗೆ ಯಾವುದೇ ರೀತಿಯ ಸಹಾಯ ಬೇಕಿದ್ದಲ್ಲಿ, ಅದನ್ನು ತ್ವರಿತ ರೀತಿಯಲ್ಲಿ ಒದಗಿಸಬೇಕು.

ಕೋವಿಡ್-19 ಸಾಂಕ್ರಾಮಿಕ ಹರಡಿದ ಜಾಗದಿಂದ ವರದಿ ಮಾಡುವ ಹಾಗು ಲಾಕ್​ಡೌನ್ ವೇಳೆ ಸಂಭಾವ್ಯ ಮಾನಸಿಕ ಪರಿಣಾಮವನ್ನು ಪರಿಗಣನೆಗೆ ತೆಗೆದುಕೊಳ್ಳಿ. ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಅಥವಾ ಐಸೊಲೇಶನ್ ಕೇಂದ್ರಗಳಿಂದ, ಕ್ವಾರಂಟೈನ್ ಪ್ರದೇಶಗಳಿಂದ ವರದಿ ಮಾಡುವಾಗ ಇದನ್ನು ಗಮನಿಸುವುದು ಅಗತ್ಯ. ಅಪಘಾತ ಸ್ಥಿತಿಯ ಬಗ್ಗೆ ವರದಿ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ಉಪಯುಕ್ತ ಮಾಹಿತಿಗಳು ಡಿಎಆರ್‍ಟಿ ಸೆಂಟರ್ ಫಾರ್ ಜರ್ನಲಿಸಂ ಅಂಡ್ ಟ್ರಾಮಾ ಮೂಲಕ ಲಭ್ಯ. ಹೆಚ್ಚಿನ ಸುರಕ್ಷತಾ ಸಂಪನ್ಮೂಲಗಳಿಗಾಗಿ ಸಿಪಿಜೆ ತುರ್ತು ಘಟನೆಗಳ ಬಗ್ಗೆ ಇರುವ ಮಾಹಿತಿಯನ್ನು ನೋಡಿ.

ನೀವು ಕರ್ತವ್ಯಕ್ಕೆ ನಿಯೋಜಿತರಾದ ಅವಧಿಯಲ್ಲಿ ಅಸ್ವಸ್ಥರಾದರೆ, ಯಾವ ಬಗೆಯ ನೆರವು ಹಾಗೂ ಬೆಂಬಲವನ್ನು ಆಡಳಿತ ಮಂಡಳಿ ಒದಗಿಸುತ್ತದೆ ಎಂಬ ಬಗ್ಗೆ ಚರ್ಚಿಸಿ. ಸ್ವಯಂ ಪ್ರತ್ಯೇಕತೆ ಅಥವಾ ಕ್ವಾರಂಟೈನ್/ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಿ.

ಸೋಂಕಿನಿಂದ ತಪ್ಪಿಸಿಕೊಳ್ಳುವುದು ಹಾಗು ಇತರರಿಗೆ ಹರಡದಂತೆ ನೋಡಿಕೊಳ್ಳುವುದು

ಹಲವು ದೇಶಗಳು ಇಂದು ಸಾಮಾಜಿಕ/ ದೈಹಿಕ ಅಂತರವನ್ನು ಅನುಸರಿಸುತ್ತಿವೆ. ದೈಹಿಕ ಅಂತರವನ್ನು ಕಾಪಾಡಲು ನಿಗದಿ ಮಾಡಲಾಗಿರುವ ದೂರವು ನೀವು ಇರುವ ದೇಶದ ಮೇಲೆ ಅವಲಂಬಿಸುತ್ತದೆ. ಈ ಕೆಳಗೆ ನೀಡಲಾಗಿರುವ ಅತಿ ಹೆಚ್ಚಿನ ಅಪಾಯವಿರುವ ಪ್ರದೇಶಗಳಿಂದ ನೀವು ವರದಿ ಮಾಡುತ್ತಿದ್ದಲ್ಲಿ, ಅಲ್ಲಿ ಕೈಗೊಂಡಿರುವ ನೈರ್ಮಲ್ಯ ಕ್ರಮಗಳ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಳ್ಳಿ. ನಿಮಗೆ ಸಂದೇಹವಿದ್ದಲ್ಲಿ ಅಲ್ಲಿಗೆ ಭೇಟಿ ನೀಡಬೇಡಿ. ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿಕೊಳ್ಳಲು ಮಾಡುವ ನಿಗದಿತ ಶಿಫಾರಸ್ಸುಗಳು ಈ ಕೆಳಗಿನಂತಿವೆ: 

ಸೋಂಕಿನಿಂದ ತಪ್ಪಿಸಿಕೊಳ್ಳಲು ಪ್ರಮಾಣಿತ ಶಿಫಾರಸುಗಳು:

ವೈಯಕ್ತಿಕ ಸುರಕ್ಷಾ ಸಾಧನಗಳು (ಪಿಪಿಇ)

ನಿಯೋಜನೆಯ ಸ್ವರೂಪದ ಆಧಾರದ ಮೇಲೆ, ಸುರಕ್ಷಿತವಾಗಿ ವರದಿ ಮಾಡಲು ಪತ್ರಕರ್ತರು ವೈದ್ಯಕೀಯ ಪಿಪಿಇಗಳನ್ನು ಧರಿಸಬೇಕಾಗಬಹುದು. ಇವುಗಳು ವಿಲೇವಾರಿ ಮಾಡಲಾಗುವ ಕೈಗವಸುಗಳು, ಮುಖವಾಡಗಳು, ಏಪ್ರನ್/ಮೇಲುಡುಪು/ಬಾಡಿ ಸೂಟ್ ಗಳು ಮತ್ತು ಪಾದರಕ್ಷೆಗಳನ್ನು ಮುಚ್ಚುವ ಕವರ್ ಹಾಗು ಇತರೆ ವಸ್ತುಗಳಾಗಿವೆ.

ಯಾವುದೇ ವೈದ್ಯಕೀಯ ಪಿಪಿಇ  ಹಾಕಿಕೊಳ್ಳುವಾಗ ಮತ್ತು ಕಳಚುವಾಗ ಸಾಧ್ಯವಾದಷ್ಟೂ ಸುರಕ್ಷತಾ ಕ್ರಮಗಳಿಗೆ ಕಟ್ಟುನಿಟ್ಟಾಗಿ ಬದ್ಧರಾಗುವುದು ಅಗತ್ಯ. ಸಿಡಿಸಿಯಿಂದ ಸಾಮಾನ್ಯ ಮಾರ್ಗದರ್ಶನಕ್ಕಾಗಿ ಕ್ಲಿಕ್ ಮಾಡಿ

(ಪಿಪಿಇಗಳನ್ನು ತೆಗೆಯುವ ಸಮಯದಲ್ಲಿ ವಿಶೇಷ ಕಾಳಜಿಯನ್ನು ವಹಿಸಬೇಕು. ಏಕೆಂದರೆ, ಈ ಸಮಯದಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಅತಿ ಹೆಚ್ಚಾಗಿರುತ್ತದೆ. ಯಾವುದೇ ಸಂದೇಹವಿದ್ದಲ್ಲಿ, ನಿಯೋಜನೆಯ ಮೇಲೆ ತೆರಳುವ ಮೊದಲು ತಜ್ಞರ ಸಲಹೆಯನ್ನು ಮತ್ತು ತರಬೇತಿಯನ್ನು ಪಡೆಯಿರಿ.)

ದಯವಿಟ್ಟು ಗಮನಿಸಿ – ಕೆಲವು ದೇಶಗಳಲ್ಲಿ ಒಳ್ಳೆಯ ಗುಣಮಟ್ಟದ ವೈದ್ಯಕೀಯ ಪಿಪಿಇಗಳು ಕಡಿಮೆ ಪ್ರಮಾಣದಲ್ಲಿ ದೊರೆಯುತ್ತವೆ. ಅದರ ಬಳಕೆಯು ಕೊರತೆಯನ್ನು ಸೃಷ್ಟಿಸುವ ಸಾಧ್ಯತೆಗಳು ಇರುತ್ತವೆ.

ಮುಖದ ಮಾಸ್ಕ್

ಸಾರ್ವಜನಿಕ ಸ್ಥಳಗಳಲ್ಲಿ, ಇಕ್ಕಟ್ಟಾದ ಜಾಗಗಳಲ್ಲಿ ಅಥವಾ ಅತಿ ಹೆಚ್ಚು ಅಪಾಯವಿರುವ ಸ್ಥಳಗಳಲ್ಲಿ ವರದಿ ಮಾಡುವ ಪತ್ರಕರ್ತರು ಸರಿಯಾಗಿ ಮುಖವಾಡ ಅಥವಾ ಮಾಸ್ಕ್ ಗಳನ್ನು ಧರಿಸುವುದು ಅತಿ ಅವಶ್ಯಕ. ಇಂತಹ ಸ್ಥಳಗಳಲ್ಲಿ ಇರುವ ಗಾಳಿಯಲ್ಲಿ ವೈರಾಣುಯುಕ್ತ ಹನಿಗಳು ಬೇರೆಡೆಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿಇರುತ್ತವೆ. ಇದರಿಂದ ನೀವು ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಗಮವಿಡಿ: ಮಾಸ್ಕ್ ಗಳನ್ನೂ ಸರಿಯಾದ ರೀತಿಯಲ್ಲಿ ಬಳಸಿದರೆ ಮಾತ್ರ ನಮಗೆ ರಕ್ಷಣೆ ಲಭ್ಯವಿರುತ್ತದೆ. ಲಾನ್ಸೆಟ್ ಇನ ಅಧ್ಯಯನದ ಪ್ರಕಾರ, ಸರ್ಜಿಕಲ್ ಮಾಸ್ಕ್ ಮೇಲೂ ವೈರಸ್ ಇರುವುದು ಕಂಡುಬಂದಿದೆ. ಈ ಅಧ್ಯಯನದ ಪ್ರಕಾರ, ಮಾಸ್ಕ್ ನನ್ನು ಪುನಃ ಪುನಃ ತೆಗೆದು ಹಾಕುವುದು, ಮಾಸ್ಕ್ ಮುಟ್ಟಿ ಮುಖವನ್ನು ಮುಟ್ಟುವುದು ಮಾಡಿದರೆ, ಸೋಂಕು ತಗುಲುತ್ತದೆ.

ನೀವು ಮುಖದ ಮಾಸ್ಕ್ ಬಳಸುವುದಾದಲ್ಲಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಬೇಕು:

ಸಲಕರಣೆಗಳ ಸುರಕ್ಷೆ

ಸೋಂಕಿನ ಸಂಪರ್ಕಕ್ಕೆ ಬಂದ ಉಪಕರಣಗಳ ಮೂಲಕ ಕೋವಿಡ್19 ಹರಡುವುದು ವಾಸ್ತವಿಕ ಸತ್ಯವಾಗಿದೆ. ಸುರಕ್ಷತಾ ಕ್ರಮಗಳನ್ನು ಎಲ್ಲಾ ಸಮಯದಲ್ಲೂ ಪಾಲಿಸಿ ಅನುಸರಿಸಬೇಕು:

ವಿದ್ಯುತ್ ಉಪಕರಣಗಳನ್ನು ಸ್ವಚ್ಛಗೊಳಿಸುವ ವಿಧಾನ

ಕೆಳಗೆ ನೀಡಿರುವ ಸಲಹೆಗಳು ವಿದ್ಯುತ್ ಉಪಕರಣಗಳನ್ನು ಬಳಸುವಾಗ ಸಹಾಯವಾಗಲಿವೆ. ಸ್ವಚ್ಛ ಮಾಡುವ ಮೊದಲು ಯಾವಾಗಲೂ ಅದರ ತಯಾರಕರು ನೀಡಿರುವ ಸಲಹೆಗಳನ್ನು ಓದಿ.

ಈ ಲಿಂಕ್ ಬಳಸಿ ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಬಹುದು.

ಡಿಜಿಟಲ್ ಭದ್ರತೆ

ಕೆಲಸದ ವೇಳೆ ದೈಹಿಕ ಭದ್ರತೆ

ಅಂತರರಾಷ್ಟ್ರೀಯ ಪ್ರಯಾಣ ನಿಯೋಜನೆಗಳು

ಜಾಗತಿಕವಾಗಿ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವುದರಿಂದ ಅಂತರರಾಷ್ಟ್ರೀಯ ಪ್ರವಾಸ ನಿಜಕ್ಕೂ (ಕಷ್ಟಕರವಾಗಿ ಉಳಿದಿದೆ).  ನಿಮ್ಮ ಸಾಗರೋತ್ತರ ಕಾರ್ಯಗಳು ಸಾಧ್ಯ ಎಂದಾದಲ್ಲಿ ಈ ಕೆಳಗಿನ ಅಂಶಗಳ ಬಗ್ಗೆ ಗಮನ ಹರಿಸಿ:

ನಿಯೋಜನೆಯ ನಂತರ

ನಿಮಗೆ ರೋಗಲಕ್ಷಣ ಕಾಣಿಸಿಕೊಂಡಲ್ಲಿ

ಸಿಪಿಜೆಯ ಆನ್‍ಲೈನ್ ಸುರಕ್ಷಾ ಕಿಟ್, ನಾಗರಿಕ ಅಶಾಂತಿ, ಅರಾಜಕತೆ ಮತ್ತು ಚುನಾವಣೆಯ ವರದಿಗಾರಿಕೆ ಸಂದರ್ಭಕ್ಕೆ ಅಗತ್ಯವಾದ ದೈಹಿಕ, ಡಿಜಿಟಲ್, ಮಾನಸಿಕ ಸುರಕ್ಷಾ ಸಂಪನ್ಮೂಲಗಳು ಮತ್ತು ಸಾಧನಗಳ ಬಗ್ಗೆ ಪತ್ರಕರ್ತರು ಹಾಗೂ ಸುದ್ದಿಮನೆಗಳಿಗೆಮೂಲ ಸುರಕ್ಷಾ ಮಾಹಿತಿಗಳನ್ನು ಒದಗಿಸುತ್ತದೆ

[ಸಂಪಾದಕರ ಟಿಪ್ಪಣಿ: ಈ ಸಲಹೆಗಳನ್ನು ಮೂಲತಃ ಫೆಬ್ರವರಿ 10, 2020 ರಂದು ಪ್ರಕಟಿಸಲಾಯಿತು. ಇದನ್ನು ಆಗಾಗ್ಗೆ ಪರಿಷ್ಕರಿಸಲಾಗುತ್ತಿದೆ. ಮೇಲ್ಭಾಗದಲ್ಲಿ ನೀಡಿರುವ ಪ್ರಕಟಣೆಯ ದಿನಾಂಕವು ಇತ್ತೀಚಿನ ಪರಿಷ್ಕರಣಾ ದಿನಾಂಕವಾಗಿದೆ.]

Exit mobile version